ಕುಂತೂರು: ಮುಡಿಪಿನಡ್ಕದಲ್ಲಿ ಮನೆಗೆ ಬೆಂಕಿ- ಶಾರ್ಟ್‌ ಸರ್ಕ್ಯೂಟ್‌ ಶಂಕೆ,ಚಿನ್ನ,ನಗದು ಬೆಂಕಿಗೆ ಆಹುತಿ.

ಕುಂತೂರು: ಮುಡಿಪಿನಡ್ಕದಲ್ಲಿ ಮನೆಗೆ ಬೆಂಕಿ- ಶಾರ್ಟ್‌ ಸರ್ಕ್ಯೂಟ್‌ ಶಂಕೆ,ಚಿನ್ನ,ನಗದು ಬೆಂಕಿಗೆ ಆಹುತಿ.

ನೇಸರ ಫೆ.7: ಕಡಬ ತಾಲೂಕು ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಸಿದ್ದೀಕ್.ಎ.ಎಸ್ ರವರ ಹಂಚಿನ ಮನೆಗೆ ಬೆಂಕಿ ತಗುಲಿದ ಘಟನೆ ಫೆ.7ರಂದು ನಡೆದಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದ್ದು,ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ರವರ ಅತ್ತಿಗೆ ಹಾಗೂ ಮಗು ಇದ್ದು ಬೆಂಕಿಯ ಹೊಗೆ ಬರುತ್ತಿರುವುದನ್ನು ನೋಡಿ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದಾಗಿ ಮನೆಯಲ್ಲಿದ್ದ 5 ಪವನ್ ಬಂಗಾರ, 40 ಸಾವಿರ ರೂ.ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!