ನೆಲ್ಯಾಡಿ-ಮಣ್ಣಗುಂಡಿ: ನಾಪತ್ತೆಯಾದ ಇಬ್ರಾಹಿಂ ಉಳ್ಳಾಲದಲ್ಲಿ ಪತ್ತೆ.

ನೆಲ್ಯಾಡಿ-ಮಣ್ಣಗುಂಡಿ: ನಾಪತ್ತೆಯಾದ ಇಬ್ರಾಹಿಂ ಉಳ್ಳಾಲದಲ್ಲಿ ಪತ್ತೆ.

ನೇಸರ ಫೆ.9: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಇಬ್ರಾಹಿಂ(57 ವ.)ರವರು ಫೆ.4 ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಶುಕ್ರವಾರದ ಪ್ರಾರ್ಥನೆಗಾಗಿ ಕೌಕ್ರಾಡಿ ಗ್ರಾಮದ ಹೊಸಮಜಲು ಮಸೀದಿಗೆಂದು ಮನೆಯಿಂದ ಹೋದವರು ವಾಪಸು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಅವರು ಮೊಬೈಲ್ ಫೋನ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು.ಈ ಬಗ್ಗೆ ಅವರ ಪುತ್ರ ಅಬ್ದುಲ್ ರಶೀದ್‌ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಅವರು ಉಳ್ಳಾಲದಲ್ಲಿ ಇರುವುದರ ಬಗ್ಗೆ ಮಾಹಿತಿಯನ್ನು ತಿಳಿದು, ಅವರ ಅಳಿಯ ಹಕಿಂ ಮತ್ತು ಮಗ ಅಬ್ದುಲ್ ರಶೀದ್ ಅಲ್ಲಿಗೆ ತೆರಳಿ ಅವರನ್ನು ಕರೆ ತರುವಲ್ಲಿ ಯಶಸ್ವಿಯಾದರು.ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ

Leave a Reply

You May Have Missed

error: Content is protected !!