ಉದನೆ: ಕಾರು, ಬೈಕ್ ಡಿಕ್ಕಿ ; ಬೈಕ್ ಸವಾರನಿಗೆ ಗಾಯ

ಉದನೆ: ಕಾರು, ಬೈಕ್ ಡಿಕ್ಕಿ ; ಬೈಕ್ ಸವಾರನಿಗೆ ಗಾಯ

ನೆಲ್ಯಾಡಿ: ಸ್ಕಾರ್ಪಿಯೋ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು-ಬೆಂಗಳೂರು ರಾ.ಹೆ.75ರ ಉದನೆಯಲ್ಲಿ ಎ.12ರಂದು ಸಂಜೆ ನಡೆದಿದೆ.

ಶಿರಾಡಿ ಗ್ರಾಮದ ಕಳಪ್ಪಾರು ನಿವಾಸಿ ನಿತ್ಯಾನಂದ ಕೆ.(27ವ.)ಗಾಯಗೊಂಡವರಾಗಿದ್ದಾರೆ. ನಿತ್ಯಾನಂದ ಅವರು ನೆಲ್ಯಾಡಿಯಿಂದ ಉದನೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮಹಮ್ಮದ್ ಸಫ್ವಾನ್ ಎಂಬವರು ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ನಡುವೆ ಉದನೆಯಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ನಿತ್ಯಾನಂದ ಅವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ, ಅಲ್ಲಿಂದ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೈಕ್ ಸವಾರ ನಿತ್ಯಾನಂದ ಅವರ ದೂರಿನಂತೆ ಕಾರು ಚಾಲಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!