ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಮಹಿಳಾ ವಿಭಾಗದವರಿಂದ “ವಿಷು ಕಣಿ ” ಆಚರಣೆ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಮಹಿಳಾ ವಿಭಾಗದವರಿಂದ “ವಿಷು ಕಣಿ ” ಆಚರಣೆ

ನೆಲ್ಯಾಡಿ: ವಿಷು ಹಬ್ಬದ ಅಂಗವಾಗಿ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಮತ್ತು ಮಹಿಳಾ ವಿಭಾಗ ಐಶ್ವರ್ಯ ಇವುಗಳ ಸಹಭಾಗಿತ್ವದಲ್ಲಿ  ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ನೆಲ್ಯಾಡಿ ಕರಯೋಗಂ ಸಭಾಭವನದಲ್ಲಿ “ವಿಷು ಕಣಿ ” ಆಚರಣೆ  ಎ.14 ರಂದು ನಡೆಯಿತು.

ನೆಲ್ಯಾಡಿ ಕರಯೋಗಂನ ಅಧ್ಯಕ್ಷರು ,ಮಹಿಳಾ ವಿಭಾಗದ ಅಧ್ಯಕ್ಷೆ,ಕಾರ್ಯದರ್ಶಿಗಳು,ಯುತ್ ವಿಂಗ್ ಪ್ರತಿನಿಧಿಗಳು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ವಿಷು ಅಥವಾ ತುಳುನಾಡಿನಲ್ಲಿ ಇದನ್ನು ಬಿಸು ಎನ್ನುತ್ತಾರೆ.”ವಿಷು ಕಣಿ” ವಿಷು ಹಬ್ಬದ ವಿಶೇಷವಾಗಿದ್ದು ದೇವರ ವಿಗ್ರಹದ ಮುಂದೆ ನವದಾನ್ಯಗಳು, ಕನ್ನಡಿ, ಬಟ್ಟೆಬರೆ, ಬಂಗಾರದ ಆಭರಣ, ಹಣ, ಫಲವಸ್ತುಗಳು ಇತ್ಯಾದಿ ವಸ್ತುಗಳನ್ನು ಇಡುವ ಸಂಪ್ರದಾಯವಿದ್ದು ಇದನ್ನು ವಿಷು ಕಣಿ ಎನ್ನುತ್ತಾರೆ. 

Leave a Reply

You May Have Missed

error: Content is protected !!