ಅಡ್ಡಹೊಳೆ: ಕಾರು, ಲಾರಿ ಡಿಕ್ಕಿ-ನಾಲ್ವರಿಗೆ ಗಾಯ

ಅಡ್ಡಹೊಳೆ: ಕಾರು, ಲಾರಿ ಡಿಕ್ಕಿ-ನಾಲ್ವರಿಗೆ ಗಾಯ

ನೆಲ್ಯಾಡಿ: ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಹಾಸನ ಮೂಲದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಎ.27ರಂದು ರಾತ್ರಿ 11 ಗಂಟೆ ವೇಳೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಡೆದಿದೆ.

ಹಾಸನದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಬೆಂಗಳೂರು ಕಡೆಗೆ ಮಹಂತೇಶ್ ಹಿರೇಮಠ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿ ನಡುವೆ ಅಡ್ಡಹೊಳೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಹಾಸನ ನಿವಾಸಿಗಳಾದ ಕಾರು ಚಾಲಕ ತಿಲಕ್, ಅವರ ಸಹೋದರ ನಂಜೇಶ್, ಅಕ್ಕ ಮಣಿ, ಬಾವ ಮಲ್ಲೇಶ್‌ರವರು ಗಾಯಗೊಂಡಿದ್ದಾರೆ. ಗಾಯಾಳುಗಳು ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ತಿಲಕ್ ಅವರ ಸಹೋದರಿ ದೀಪಾ ಅವರು ನೀಡಿದ ದೂರಿನಂತೆ ಲಾರಿ ಚಾಲಕ ಮಹಂತೇಶ್ ಹಿರೇಮಠ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!