ಕೆ.ಎಸ್.ಆರ್.ಟಿ.ಸಿ ಚಾಲಕನ ಮೇಲೆ ತಂಡದಿಂದ ಹಲ್ಲೆ ; ಪ್ರಕರಣ ದಾಖಲು

ಕೆ.ಎಸ್.ಆರ್.ಟಿ.ಸಿ ಚಾಲಕನ ಮೇಲೆ ತಂಡದಿಂದ ಹಲ್ಲೆ ; ಪ್ರಕರಣ ದಾಖಲು

ಕೊಕ್ಕಡ: ಪುದುವೆಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಎ.23ರಂದು ಘಟನೆ ನಡೆದಿದೆ.

ಹಲ್ಲೆಗೆ ಒಳಗಾದ ವ್ಯಕ್ತಿ ಬೊಲ್ಮನಾರು ಮನೆ ನಿವಾಸಿ ಹರೀಶ್ ಕುಮಾರ್ (37) ಎಂದು ಗುರುತಿಸಲಾಗಿದೆ.

ಹರೀಶ್ ಕುಮಾರ್ ಕಳೆಂಜ ಗ್ರಾಮದ ಮಾಣಿಗೇರಿ ಹೊಳೆ ಎಂಬಲ್ಲಿ ಜೀಪು ತೊಳೆಯುತ್ತಿದ್ದ ವೇಳೆ ರಾತ್ರಿ 8.30 ಸುಮಾರಿಗೆ ಸ್ಥಳೀಯರಾದ ಪ್ರಸನ್ನ, ಅಚ್ಚು, ಶಿವಪ್ಪ, ಉಮೇಶ್ ಗೌಡ ಎಂಬವರು ಅಲ್ಲಿಗೆ ಬಂದು ತನ್ನ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಜೀಪನ್ನು ಅಲ್ಲಿಂದ ಮಾಣಿಗೇರಿ ರಸ್ತೆಯ ಸಮೀಪ ತಂದಿಟ್ಟು ಜೀಪಿನ ಟಯರ್ ಗಳ ಗಾಳಿಯನ್ನು ತೆಗೆಸಿದ್ದಾರೆ, ಅದನ್ನು ಪ್ರಶ್ನಿಸಿದಾಗ ಮತ್ತೆ ಹರೀಶ್ ಮೇಲೆ ಹಲ್ಲೆ ನಡೆಸಿದ್ದು ಹೊಯ್ಗೆ ಬಗ್ಗೆ ತಕರಾರು ತೆಗೆದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಬೊಬ್ಬೆ ಕೇಳಿ ಇತರರು ಬರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರೆ. ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಇವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!