ಪೆರಿಯಶಾಂತಿ: ಸ್ಕೂಟರ್, ಕಾರು ಡಿಕ್ಕಿ -ತಾಯಿ,ಮಗುವಿಗೆ ಗಾಯ

ಪೆರಿಯಶಾಂತಿ: ಸ್ಕೂಟರ್, ಕಾರು ಡಿಕ್ಕಿ -ತಾಯಿ,ಮಗುವಿಗೆ ಗಾಯ

ನೆಲ್ಯಾಡಿ : ಸ್ಕೂಟರ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರೆ ಹಾಗೂ ಅವರ ಮಗು ಗಾಯಗೊಂಡ ಘಟನೆ ಮೇ.17ರಂದು ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ನಡೆದಿದೆ.

ನೂಜಿಬಾಳ್ತಿಲ ನಿವಾಸಿ ನಾರಾಯಣ ಎಂಬವರ ಪತ್ನಿ ಅನಿತಾ ಅವರು ಆಕೆಯ ಮಗನನ್ನು ಸ್ಕೂಟರ್ ನಲ್ಲಿ ಕುಳ್ಳಿರಿಸಿಕೊಂಡು ನೂಜಿಬಾಳ್ತಿಲ ಕಡೆಯಿಂದ ಕೊಕ್ಕಡ ಕಡೆಗೆ ಹೋಗುತ್ತಾ ಪೆರಿಯಶಾಂತಿ ಎಂಬಲ್ಲಿಗೆ ತಲುಪಿದಾಗ ಕಾರು ಡಿಕ್ಕಿಯಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವ ಸ್ಕೂಟರ್ ಸವಾರೆ ಅನಿತಾ ಅವರು ಚಿಕಿತ್ಸೆಗಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಮಗುವಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾರು ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿ ಸ್ಕೂಟರ್ ಡಿಕ್ಕಿಯಾಗಿರುವುದಾಗಿ ಗಾಯಾಳು ಅನಿತಾ ಅವರ ಪತಿ ನಾರಾಯಣ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

You May Have Missed

error: Content is protected !!