ಉದನೆ ಕಾರು ಹಾಗೂ ಪಿಕಪ್ ವಾಹನ ಮಧ್ಯೆ ಅಪಘಾತ

ಉದನೆ ಕಾರು ಹಾಗೂ ಪಿಕಪ್ ವಾಹನ ಮಧ್ಯೆ ಅಪಘಾತ

ನೆಲ್ಯಾಡಿ: ರಾಷ್ಟೀಯ ಹೆದ್ದಾರಿ 75ರ ಉದನೆ ಸಮೀಪ ಪರವರಕೊಟ್ಯ ಎಂಬಲ್ಲಿ ಪಿಕಪ್ ಮತ್ತು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಜೂ.23ರಂದು ಬೆಳ್ಳಗ್ಗೆ ನಡೆದಿದೆ.

ಮಂಗಳೂರಿಂದ ಬೆಂಗಳೂರಿಗೆ ತರಕಾರಿಯನ್ನು ಸಾಗಿಸುವ ಪಿಕಪ್ ವಾಹನ ಹಾಗೂ ಬೆಂಗಳೂರಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಕಾರುಗಳ ಮಧ್ಯೆ ಅಪಘಾತ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸಿದ ನಾಲ್ಕು ಜನರ ಪೈಕಿ ನವೀನ್ ಕುಮಾರ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಅಪಘಾತದಲ್ಲಿ ಎರಡು ವಾಹನಗಳು ಹಾನಿಗೊಂಡಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Reply

You May Have Missed

error: Content is protected !!