ಶಿರಾಡಿ: ಟ್ಯಾಂಕರ್ ಲಾರಿ, ಸ್ವಿಫ್ಟ್, ಆಲ್ಟೋ ಕಾರು ನಡುವೆ ಸರಣಿ ಅಪಘಾತ-ನಾಲ್ವರಿಗೆ ಗಾಯ

ಶಿರಾಡಿ: ಟ್ಯಾಂಕರ್ ಲಾರಿ, ಸ್ವಿಫ್ಟ್, ಆಲ್ಟೋ ಕಾರು ನಡುವೆ ಸರಣಿ ಅಪಘಾತ-ನಾಲ್ವರಿಗೆ ಗಾಯ

ನೆಲ್ಯಾಡಿ: ಟ್ಯಾಂಕರ್ ಲಾರಿಯೊಂದು ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿ ದೂಡಿಕೊಂಡು ಬಂದ ಪರಿಣಾಮ ಸ್ವಿಫ್ಟ್ ಕಾರು ಹಿಂಬದಿಯಲ್ಲಿ ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ಜೂ.23ರಂದು ಬೆಳಿಗ್ಗೆ 8.30ರ ವೇಳೆಗೆ ನಡೆದಿದೆ. ಘಟನೆಯಲ್ಲಿ ಅಲ್ಟೋ ಕಾರಿನಲ್ಲಿದ್ದ ಮೂವರು ಹಾಗೂ ಸಿಫ್ಟ್ ಕಾರಿನ ಚಾಲಕ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಬೆಂಗಳೂರಿನಿಂದ ಮಂಗಳೂರು ಕಡೆಗೆ ದಿನೇಶ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಲಾರಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಶಿರಾಡಿ ಅರಣ್ಯ ಇಲಾಖೆ ನರ್ಸರಿ ಬಳಿ ಕಾಂಕ್ರಿಟ್ ರಸ್ತೆಯಲ್ಲಿ ಎದುರಿನಿಂದ ಮಹೇಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿ ದೂಡಿಕೊಂಡು ಬಂದು ಸ್ವಿಫ್ಟ್ ಕಾರಿನ ಹಿಂಬದಿಯಿಂದ ಬಜತ್ತೂರಿನ ರೆಂಜಾಲ ನಿವಾಸಿ ಮನೋಹರ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಅಲ್ಟೋ ಕಾರಿನಲ್ಲಿದ್ದ ಮನೋಹರ ಅವರ ಬಾವ ನಾರಾಯಣ ಕೆ., ತಾಯಿ ದಮಯಂತಿ, ಸಂಬಂಧಿಕರಾದ ಕೂಸಮ್ಮ ಹಾಗೂ ಸ್ವಿಫ್ಟ್ ಕಾರು ಚಾಲಕ ಮಹೇಶ್ ಅವರು ಗಾಯಗೊಂಡಿದ್ದಾರೆ.

ಟ್ಯಾಂಕರ್ ಲಾರಿ ಚಾಲಕ ದಿನೇಶ್ ಅವರು ಅಜಾಗರೂಕತೆಯಿಂದ ರಾಂಗ್ ಸೈಡ್‌ನಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುವುದಾಗಿ ಅಲ್ಟೋ ಕಾರು ಚಾಲಕ ಮನೋಹರ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!