ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಜು.19ರಂದು ಆರಂಭಗೊಂಡ ನವದಿನಗಳ ನೋವೇನಾ ಮಹೋತ್ಸವದ 8ನೇ ದಿನದಲ್ಲಿ ಪುತ್ತೂರು ಸೀರೋ ಮಲಂಕರ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕಾರಿಯೋಸ್ ಬಲಿ ಪೂಜೆಯನ್ನು ಅರ್ಪಿಸಿದರು ಮತ್ತು ಸಂತ ಅಲ್ಫೋನ್ಸ ನೋವೇನಾದ ಆಶೀರ್ವಾದವನ್ನು ನೀಡಿದರು.

ಪರಮ ಪೂಜ್ಯರು ಸೇವೆ, ತ್ಯಾಗ, ಮತ್ತು ದೇವರಲ್ಲಿನ ಪ್ರೀತಿಯನ್ನು ಬಾಳಿನಲ್ಲಿ ಮೈಗೂಡಿಸಿಕೊಂಡಾಗ, ಎಲ್ಲವನ್ನು ಸಹಿಸುವ ತಾಳುವ ಶಕ್ತಿಯನ್ನು ಪ್ರತಿಯೋರ್ವ ವ್ಯಕ್ತಿ ಜೀವನದಲ್ಲಿ ಪಡೆಯಬಹುದೆಂದು ಕರೆ ನೀಡಿದರು.

ಬೆಥನಿ ಸಂಸ್ಥೆಗಳ ವಂದನಿಯ ವರ್ಗೀಸ್, ಕೈಪನಡ್ಕ ಪುತ್ತೂರು ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನಿಯ ಫಾ.ಬಿಜು ಜೋನ್, ಸೆಂಟ್ ಜೋರ್ಜ್ ಸಂಸ್ಥೆಗಳ ಸಂಚಾಲಕರಾದ ವಂ.ಫಾ.ನೋಮಿಸ್ ಸಹಾಯಕರಾಗಿ ಭಾಗವಹಿಸಿ ಪ್ರಾರ್ಥಿಸಿದರು. ವಂ.ಫಾ.ಎಬಿನ್ ಸ್ವಾಗತಿಸಿದರು. ಧರ್ಮಗುರುಗಳಾದ ವಂ.ಶಾಜಿ ಮಾತ್ಯು ವಂದಿಸಿದರು.

Leave a Reply

You May Have Missed

error: Content is protected !!