ಕೊಣಾಲು: ಸ್ವಾಸ್ಯ ಸಂಕಲ್ಪ ಕಾರ್ಯಕ್ರಮ

ಕೊಣಾಲು: ಸ್ವಾಸ್ಯ ಸಂಕಲ್ಪ ಕಾರ್ಯಕ್ರಮ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕಡಬ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ಸಹಯೋಗದೊಂದಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಕೊಣಾಲು ಹಾಗೂ ಪ್ರೌಢಶಾಲೆಯಲ್ಲಿ ಜು.26ರಂದು ಸ್ವಾಸ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷತೆಯನ್ನು ಗೋಳಿತೊಟ್ಟು ವಲಯದ ಒಕ್ಕೂಟದ ವಲಯ ಅಧ್ಯಕ್ಷ ಬಾಲಕೃಷ್ಣ ಅಲೆಕ್ಕಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿವಪ್ರಸಾದ್ ರೈ ಮೈಲೇರಿ ಭಾಗವಹಿಸಿದ್ದರು.

ಕಾಲೇಜು ಉಪನ್ಯಾಸಕಿ ಜಲಜ ಹಾಗೂ ಹೈಸ್ಕೂಲು ಪ್ರಭಾರ ಮುಖ್ಯಗುರು ರಮಣಿ, ದೈಹಿಕ ಶಿಕ್ಷಕ ಬಾಲಕೃಷ್ಣ ಹಾಗೂ ಒಕ್ಕೂಟದ ಅಧ್ಯಕ್ಷ ನಿತಿನ್ ಕುಮಾರ್ ಅವರು ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ನೇಮಿರಾಜ ಸ್ವಾಗತಿಸಿದರು. ಗೋಳಿತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಬಾಲಕೃಷ್ಣ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಪ್ರತಿಮಾ, ನೆಮಿರಾಜ್ ಹಾಗು ಹೇಮಲತಾ ಭಾಗವಹಿಸಿದರು.

Leave a Reply

You May Have Missed

error: Content is protected !!