ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಸ್ವಯಂಸೇವಕರಿಗೆ ಮಾಹಿತಿ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಸ್ವಯಂಸೇವಕರಿಗೆ ಮಾಹಿತಿ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಅ.24ರಂದು ನಡೆಯಿತು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಆರತಿ.ಕೆ. ಎನ್ ಎಸ್ ಎಸ್ ಘಟಕಗಳ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಪ್ರದೀಪ್.ಸಿ.ವಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮಹತ್ವದ ಕುರಿತು ಮಾಹಿತಿ ತಿಳಿಸಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಜನಾಧಿಕಾರಿ ಸುಮಿತ್ರ ಕುಮಾರಿ.ಎ, ಘಟಕದ ನಾಯಕರುಗಳಾದ ನಿಶಾ ಗೌರಿ.ಎಂ, ಯಕ್ಷ.ಪಿ.ಎಸ್, ಜೀವನ್.ಎ, ಉಪಸ್ಥಿತರಿದ್ದರು.

ಯಕ್ಷ ಸ್ವಾಗತಿಸಿದರು, ಜೀವನ್ ಕಾರ್ಯಕ್ರಮ ನಿರೂಪಿಸಿದರು, ನಿಶಾ ಗೌರಿ ವಂದಿಸಿದರು.

Leave a Reply

You May Have Missed

error: Content is protected !!