ಮರವೂರು ದುರಂತ – ಮತ್ತೋರ್ವನ ಮೃತದೇಹ ಪತ್ತೆ

ಮರವೂರು ದುರಂತ – ಮತ್ತೋರ್ವನ ಮೃತದೇಹ ಪತ್ತೆ

ಬಜಪೆ: ಮರವೂರು ಪಲ್ಗುಣಿ ನದಿಯಲ್ಲಿ ರೈಲ್ವೇ ಸೇತುವೆಯ ಸಮೀಪ ಭಾನುವಾರ ಸಂಜೆ ಈಜಲು ಹೋಗಿದ್ದ ವೇಳೆ ಸುಳಿಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಪೈಕಿ ಅನಿಶ್ (19) ಎಂಬಾತನ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು ಘಟನೆ ಸಂಭವಿಸಿ 40 ಗಂಟೆಗಳ ಬಳಿಕ ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಎಂಬಾತನ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಮಂಗಳೂರಿನ ನಾಲ್ವರು ಯುವಕರ ತಂಡ ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಮರವೂರು ಪಲ್ಗುಣಿ ನದಿಯಲ್ಲಿ ಈಜಲು ತೆರಳಿದ್ದು ಮಂಗಳೂರು ಕೋಡಿಕಲ್ ನಿವಾಸಿಗಳಾದ ಅರುಣ್ ಹಾಗೂ ದೀಕ್ಷಿತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

Leave a Reply

You May Have Missed

error: Content is protected !!