ಕೊಕ್ಕಡ: ಹಿಂದಕ್ಕೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು ಆತೂರಿನ ಆಯಿಷಾ ಸ್ಕೂಲ್ ನ ವಿಧ್ಯಾರ್ಥಿ ದಾರುಣ ಸಾವು

ಕೊಕ್ಕಡ: ಹಿಂದಕ್ಕೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು ಆತೂರಿನ ಆಯಿಷಾ ಸ್ಕೂಲ್ ನ ವಿಧ್ಯಾರ್ಥಿ ದಾರುಣ ಸಾವು

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಅ.1ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.

ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಹಮೀದ್ ಎಂಬವರ 10ವರ್ಷ ಪ್ರಾಯದ ಪುತ್ರ, ಆತೂರಿನ ಆಯಿಷಾ ಸ್ಕೂಲ್ ನ 4ನೇ ತರಗತಿಯ ವಿಧ್ಯಾರ್ಥಿ ನವಾಫ್ ಇಸ್ಮಾಯಿಲ್ ಮೃತಪಟ್ಟವರು.

ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದರು. ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿ ಮೃತಪಟ್ಡಿದ್ದಾರೆ.

ಆತೂರಿನ ಆಯಿಷಾ ಸ್ಕೂಲ್ ನ 4ನೇ ತರಗತಿಯ ವಿಧ್ಯಾರ್ಥಿ ನವಾಫ್ ಇಸ್ಮಾಯಿಲ್ ನಿಧನ ನವಾಫ್ ಅವರು ಕಾರಿನ ಹಿಂಬದಿ ನಿಂತಿದ್ದದ್ದು ಅರಿವಿಗೆ ಬಾರದೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Leave a Reply

You May Have Missed

error: Content is protected !!