ದಾರಂದ ಬಿದ್ದು ಬಾಲಕಿ ಸಾವು

ದಾರಂದ ಬಿದ್ದು ಬಾಲಕಿ ಸಾವು

ಹೊಸ ಮನೆಗೆ ಅಳವಡಿಸಲು ತಂದಿರಿಸಲಾಗಿದ್ದ ದಾರಂದ ಬಿದ್ದು ಬಾಲಕಿ ಮೃತಪಟ್ಟ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆಯಲ್ಲಿ ಸಂಭವಿಸಿದೆ.

ಕೊನಲೆ ನಿವಾಸಿ ಹಾರೀಸ್‌ ಮುಸ್ಲಿಯಾರ್‌ ಮತ್ತು ಅಸ್ಮಾ ದಂಪತಿಯ 4 ಹೆಣ್ಮಕ್ಕಳಲ್ಲಿ 3ನೆಯವಳಾಗಿದ್ದ, ಕೇರ್ಯಾ ಸರಕಾರಿ ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿ ಅಲ್ಫಿಯಾ (6) ಮೃತ ಬಾಲಕಿ. ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಗುರುವಾರ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ತಂದಿರಿಸಿದ್ದರು. ಬಾಲಕಿ ಆಟವಾಡುತ್ತಿದ್ದಾಗ ದಾರಂದ ಆಕೆಯ ತಲೆಗೆ ಬಿದ್ದು ಗಂಭೀರ ಗಾಯವಾಗಿತ್ತು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಆಕೆ ಮೃತಪಟ್ಟಿದೆ. ಕೇರ್ಯ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

Previous post

ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಜ್ಞಾನಮಯ ಪ್ರದೀಪ ಹಾಗೂ ಘೋಷ್ ವಾದನಗಳ ಸಮರ್ಪಣೆ

Next post

ಅರಸಿನಮಕ್ಕಿ ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆ

Leave a Reply

You May Have Missed

error: Content is protected !!