ಅರಸಿನಮಕ್ಕಿ ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆ

ಅರಸಿನಮಕ್ಕಿ ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆ

ಕೊಕ್ಕಡ: ಅರಸಿನಮಕ್ಕಿ ಶ್ರೀ ಕ್ಷೇತ್ರ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಅ.3 ರಿಂದ ಅ.11 ರವರೆಗೆ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಜರುಗಲಿದೆ.

ಅ.3ರ ಬೆಳಿಗ್ಗೆ ದೇವಾಲಯದಲ್ಲಿ ತೆನೆ ಕಟ್ಟುವುದು ಹಾಗೂ ನೂತನ ಶಿಲಾಮಯ ದೀಪಸ್ಥಂಭ ಉದ್ಘಾಟನೆಯು ನೆರೆವೇರಿತು ನಂತರ ಅಭಿಷೇಕ ಪೂಜೆ, ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆಯು ನಡೆಯಿತು.

ಈ ವೇಳೆ ವನದುರ್ಗಾ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಶ್ರೀರಂಗ ದಾಮ್ಲೆ ಅರಸಿನಮಕ್ಕಿ, ಅರ್ಚಕ ಉಲ್ಲಾಸ್ ಭಟ್, ಆಡಳಿತ ಸಮಿತಿಯ ಅಧ್ಯಕ್ಷ ಪದ್ಮಯ್ಯ ಬಾರಿಗ, ಧ. ಗ್ರಾ, ಯೋಜನೆಯ ಶಶಿಕಲಾ ಹಾಗೂ ಸೇವಾ ಪ್ರತಿನಿಧಿ ಯಮುನಾ, ಟ್ರಸ್ಟ್ ನ ಸದಸ್ಯರು, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!