ನೆಲ್ಯಾಡಿ ವಿವಿ ಕಾಲೇಜಿನಲ್ಲಿ ‘ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನಾ’ ಸಮಿತಿಯ ಉದ್ಘಾಟನೆ ಮತ್ತು ಉದ್ಯೋಗ ತರಬೇತಿ ಕಾರ್ಯಾಗಾರ

ನೆಲ್ಯಾಡಿ ವಿವಿ ಕಾಲೇಜಿನಲ್ಲಿ ‘ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನಾ’ ಸಮಿತಿಯ ಉದ್ಘಾಟನೆ ಮತ್ತು ಉದ್ಯೋಗ ತರಬೇತಿ ಕಾರ್ಯಾಗಾರ

ನೆಲ್ಯಾಡಿ: ನೆಲ್ಯಾಡಿ ವಿವಿ ಕಾಲೇಜಿನಲ್ಲಿ ‘ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನಾ’ ಸಮಿತಿಯ ಉದ್ಘಾಟನೆ ಮತ್ತು ಉದ್ಯೋಗ ತರಬೇತಿ ಕಾರ್ಯಾಗಾರ ಗುರುವಾರ ನಡೆಯಿತು.

ಡಾ.ಅಜಯ್ಆರ್ಯನ್ ಜನರಲ್ ಮ್ಯಾನೇಜರ್, ಮಂಗಳೂರು ಸ್ಪ್ರಿಂಗ್ ಇನ್ಸ್ಟಿಟ್ಯೂಟ್ ಅವರು ಉದ್ಘಾಟಿಸಿ ಹಲವು ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸಿ ಶುಭ ಹಾರೈಸಿದರು. ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳ ಬಗ್ಗೆ ವಿಸ್ತೃತ ಮಾಹಿತಿ ಒದಗಿಸಿದರು. ಉದ್ಯೋಗ ಪಡೆದುಕೊಳ್ಳಬೇಕಾದಲ್ಲಿ ಇರಬೇಕಾದ ಮೂಲಭೂತ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಇದರ ಜತೆ ಪದವಿ ನಂತರದಲ್ಲಿ ವೃತ್ತಿ ಆಧಾರಿತ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಲಾಜಿಸ್ಟಿಕ್ಸ್ ಮೊದಲಾದ ಹೊಸ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದರು.

ವಿವಿ ಕಾಲೇಜಿನ ಸಂಯೋಜಕ ಡಾ.ಸುರೇಶ್ ಅವರು ಅಧ್ಯಕ್ಷತೆ ವಹಿಸಿ ಉದ್ಯೋಗ ಪ್ರತಿಯೊಬ್ಬರಿಗೂ ಅಗತ್ಯ. ಹಾಗಾಗಿ ವೃತ್ತಿ ಮಾಹಿತಿಯು ಬಹಳ ಮುಖ್ಯವಾದದ್ದು ಎಂಬುದರ ನೆಲೆಯಲ್ಲಿ ಸಮಿತಿಯ ಕಾರ್ಯಚಟುವಟಿಕೆಯ ಕುರಿತು ಮಾತಾಡಿದರು.

ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನಾ ಸಮಿತಿಯಸಂಚಾಲಕ ಡಾ. ಸೀತಾರಾಮ.ಪಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ವೆರೋನಿಕಾ ಪ್ರಭಾ ಅತಿಥಿಗಳನ್ನು ಪರಿಚಯಿಸಿದರು. ಪಾವನ ರೈ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್.ಎನ್.ಟಿ. ವಂದಿಸಿದರು.

ಕಾರ್ಯಕ್ರಮದಲ್ಲಿ ಶೆರ್ಲಿ ಅಬ್ರಾಹಂ ಮಾರ್ಕೆಟಿಂಗ್ ಆಫೀಸರ್, ಸ್ಪ್ರಿಂಗ್ ಇನ್ಸ್ಟಿಟ್ಯೂಟ್ ಮಂಗಳೂರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!