ನೆಲ್ಯಾಡಿ ಜೇಸಿಐ ಘಟಕದಿಂದ ಜೇಸಿಐ ಇಂಡಿಯಾದ ವಿದ್ಯಾರ್ಥಿ ವೇತನಕ್ಕೆ 5 ವಿದ್ಯಾರ್ಥಿಗಳು ಆಯ್ಕೆ

ನೆಲ್ಯಾಡಿ ಜೇಸಿಐ ಘಟಕದಿಂದ ಜೇಸಿಐ ಇಂಡಿಯಾದ ವಿದ್ಯಾರ್ಥಿ ವೇತನಕ್ಕೆ 5 ವಿದ್ಯಾರ್ಥಿಗಳು ಆಯ್ಕೆ

ನೆಲ್ಯಾಡಿ: ಜೇಸಿಐ ಇಂಡಿಯಾದ ವತಿಯಿಂದ 9ನೇ ತರಗತಿಯಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕೆ ನೆಲ್ಯಾಡಿ ಜೇಸಿಐ ಘಟಕದ ವತಿಯಿಂದ ಕೊಣಾಲು ಸರಕಾರಿ ಪ್ರೌಢಶಾಲೆಯ 5 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು. ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್, ಮಹಿಳಾ ಜೇಸಿಐ ಅಧ್ಯಕ್ಷೆ ಲೀಲಾ ಮೋಹನ್ ಅವರು ಶಾಲೆಗೆ ಭೇಟಿ ನೀಡಿ ಜೇಸಿ ವತಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿದರು.

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುವಲ್ಲಿ ಸಹಕರಿಸಿದ ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್ ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ಶಶಿಧರ್. ರೈ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕಮಲಾಕ್ಷ.ಜಿ ಹಾಗೂ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!