ನೆಲ್ಯಾಡಿ:ಶೌರ್ಯ ವಿಪತ್ತು ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ನೆಲ್ಯಾಡಿ:ಶೌರ್ಯ ವಿಪತ್ತು ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಕಡಬ ತಾಲೂಕು ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ನೆಲ್ಯಾಡಿ ಸಿರಿ ಘಟಕದ ಒಳ ಆವರಣ ಹಾಗೂ ಹೊರ ಆವರಣ ಸ್ವಚ್ಛ ಮಾಡಲಾಯಿತು.

ತಿಂಗಳ ಮಾಸಿಕ ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ ಅವರು ಉಪಸ್ಥಿತರಿದ್ದು ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಿದರು. ಘಟಕ ಪ್ರತಿನಿಧಿ ರಮೇಶ್ ಬಾಣಜಾಲು ಇವರು ಅಧ್ಯಕ್ಷತೆ ವಹಿಸಿದ್ದರು.

ಈ ಸಭೆಯಲ್ಲಿ ಘಟಕ ಸಂಯೋಜಕಿ ನಮಿತಾ ಎಸ್ ಶೆಟ್ಟಿ, ನೆಲ್ಯಾಡಿ ಒಕ್ಕೂಟದ ಸೇವಾಪ್ರತಿನಿಧಿ ಹೇಮಾವತಿ.ಜೆ ಉಪಸ್ಥಿತರಿದ್ದರು. ಕುಸುಮ.ಕೆ ವಂದಿಸಿದರು. ಶೌರ್ಯ ಘಟಕದ ಎಲ್ಲಾ ಸ್ವಯಂ ಸೇವಕರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

You May Have Missed

error: Content is protected !!