ಕೊಕ್ಕಡ: ಹಾರ ನಿವಾಸಿ ಮೋಹನ ಗೌಡ ನಿಧನ

ಕೊಕ್ಕಡ ಗ್ರಾಮದ ಹಾರ ನಿವಾಸಿ ಮೋಹನ ಗೌಡ(59ವ) ಅವರು ಅಸೌಖ್ಯದಿಂದ ನ.9ರಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಅವರು ಕೊಕ್ಕಡ ಜನಜಾಗೃತಿ ವಲಯಾಧ್ಯಕ್ಷರಾಗಿ, ಜನಜಾಗೃತಿ ತಾಲೂಕು ಸದಸ್ಯರಾಗಿ, ಕೊಕ್ಕಡ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾಗಿ, ಪುತ್ಯೆ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಕಾರ್ಯದರ್ಶಿಯಾಗಿ, ಮಾಯಿಲಕೋಟೆ ಸೀಮೆ ದೈವಸ್ಥಾನದ ಟ್ರಸ್ಟಿಯಾಗಿ, ಮಾಯಿಲಕೋಟೆ ಸೀಮೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು.
ಮೃತರು ಪತ್ನಿ ಕುಸುಮ, ಪುತ್ರ ಗೌತಮ್, ಪುತ್ರಿ ಪೂರ್ಣಿಮ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.






















Leave a Reply