ಮುಸ್ಲಿಂ ಯುವಕ -ಹಿಂದೂ ಯುವತಿ ಸೌತಡ್ಕದಲ್ಲಿ ಪತ್ತೆ; ಪೊಲೀಸರಿಗೋಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಕೊಕ್ಕಡ: ಕೊಪ್ಪಳ ಮೂಲದ ಮುಸ್ಲಿಂ ಯುವಕ ಸಲೀಂ ಮತ್ತು ಬೆಂಗಳೂರು ಮೂಲದ ಹಿಂದೂ ಯುವತಿ ಕೊಕ್ಕಡದಿಂದ ರಿಕ್ಷಾದ ಮೂಲಕ ಸೌತಡ್ಕ ದೇವಸ್ಥಾನಕ್ಕೆ ಬಂದು ರಿಕ್ಷಾದಿಂದ ಇಳಿದು ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಹುಡುಗನ ಹೆಸರು ಸಲೀಂ ಎಂದು ತಿಳಿದು ಕೂಡಲೇ ರಿಕ್ಷಾ ಚಾಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಾಗ ಅನ್ಯ ಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೋಪ್ಪಿಸಿದ ಘಟನೆ ನಡೆದಿದೆ.
ಧರ್ಮಸ್ಥಳ ಠಾಣೆಯ ಪೊಲೀಸರು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಯುವಕ ಮತ್ತು ಯುವತಿಯ ಮನೆಯವರನ್ನು ಕರೆಯಿಸಿದ ನಂತರವೇ ಅವರನ್ನು ಬಿಟ್ಟು ಕಳುಹಿಸಬೇಕು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.






















Leave a Reply