ಇಚ್ಲಂಪಾಡಿ: ಕರ್ತಡ್ಕ ಎಂಬಲ್ಲಿ 18 ಲಕ್ಷ ರೂ.,ವೆಚ್ಚದಲ್ಲಿ ನಡೆಯಲಿರುವ ಸೇತುವೆ ಕಾಮಗಾರಿಗೆ ಗುದ್ದಲ್ಲಿ ಪೂಜೆ

ಇಚ್ಲಂಪಾಡಿ: ಕರ್ತಡ್ಕ ಎಂಬಲ್ಲಿ 18 ಲಕ್ಷ ರೂ.,ವೆಚ್ಚದಲ್ಲಿ ನಡೆಯಲಿರುವ ಸೇತುವೆ ಕಾಮಗಾರಿಗೆ ಗುದ್ದಲ್ಲಿ ಪೂಜೆ

ನೇಸರ ಮಾ.03: ಇಚ್ಲಂಪಾಡಿ ಗ್ರಾಮದ ಕೊರಮೇರು ಕರ್ತಡ್ಕ ಎಂಬಲ್ಲಿ 18 ಲಕ್ಷ ರೂ.,ವೆಚ್ಚದಲ್ಲಿ ನಡೆಯಲಿರುವ ಸೇತುವೆ ಕಾಮಗಾರಿಗೆ ಗುದ್ದಲ್ಲಿ ಪೂಜೆಯನ್ನು ಮಾ.2 ರಂದು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೆರವೇರಿಸಿ ಮಾತನಾಡಿದ ಅವರು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿದೆ.ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ನೀಡುವ ಸಹಕಾರ ಅಲ್ಲಿ ನಡೆಯುವ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು. ಜನರ ಬೇಡಿಕೆಗಳನ್ನು ಈಡೇರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿದೆ. ರಸ್ತೆ, ಸೇತುವೆ,ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸರಕಾರದ ವತಿಯಿಂದಲೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ಪಿಡಬ್ಯ್ಲೂಡಿ ಇಂಜಿನಿಯರ್ ಪ್ರಮೋದ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ.ಎಸ್.ಗೌಡ ಇಚ್ಲಂಪಾಡಿ,ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು ಸೇರಿದಂತೆ ಗ್ರಾ.ಪಂ.ಸದಸ್ಯರು, ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

—ಜಾಹೀರಾತು—

Previous post

ನೆಲ್ಯಾಡಿ:ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ-2022, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

Next post

ಕೌಕ್ರಾಡಿ: ಸುದೆಗಂಡಿ-ನೆಲ್ಲಿತಡ್ಕ ಎಂಬಲ್ಲಿ 10 ಲಕ್ಷ ರೂ.,ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಉದ್ಘಾಟನೆ

Leave a Reply

You May Have Missed

error: Content is protected !!