ನೆಲ್ಯಾಡಿ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ಕಲಾವಿದರಿಗೆ “ಕನ್ನಡಶ್ರೀ” ರಾಜ್ಯ ಪುರಸ್ಕಾರ

ನೇಸರ ಮಾ.04: ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಂಗಳೂರು, ಸಮೃದ್ಧಿ ಫೌಂಡೇಶನ್ ಕೊಮ್ಮಘಟ್ಟ ಇವರ ಸಹಕಾರದಲ್ಲಿ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದ “ಸಾಹಿತ್ಯ-ಸಂಸ್ಕೃತಿ” ಸಂಭ್ರಮದಲ್ಲಿ ನೆಲ್ಯಾಡಿಯ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ನಾಟ್ಯರತ್ನರಿಗೆ ಹಾಗೂ ಸಂಸ್ಥೆಯ ಸಾರಥ್ಯ ವಹಿಸಿರುವ ನಮ್ಮ ಕಲಾವಿದೆರ್ ತಂಡದ ಕುಶಾಲಪ್ಪ ನೆಲ್ಯಾಡಿಯವರಿಗೆ ಕನ್ನಡಶ್ರೀ ರಾಜ್ಯ ಪುರಸ್ಕಾರ-2021ನೀಡಿ ಗೌರವಿಸಲಾಯಿತು.ಸುದರ್ಶನ್ ಹಾಗೂ ರಮ್ಯಾರವರ ಪುತ್ರಿ, ಮಕ್ಕಳ ಕನ್ನಡ ರಾಜ್ಯ ಪುರಸ್ಕೃತೆ ಅರ್ಚನಾ ಸಂಪ್ಯಾಡಿ, ಸುಬ್ರಹ್ಮಣ್ಯ ಡಿ.,ಹಾಗೂ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿಯವರ ಪುತ್ರಿ, ರಾಜ್ಯಮಟ್ಟದ ನಾಟ್ಯರತ್ನ ಬಿರುದಾಂಕಿತೆ ಪ್ರಣಮ್ಯ.ಡಿ ಅರಸಿನಮಕ್ಕಿ, ವಿಠಲ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ, ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ಪುರಸ್ಕೃತೆ ಕೃತಿಕಾ ಅರಸಿನಮಕ್ಕಿ, ಆಲಂಕಾರು ಸಿಎ ಬ್ಯಾಂಕ್ ಉದ್ಯೋಗಿ ಹಾಗೂ ರಾಮಕುಂಜೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈಯವರ ಪುತ್ರ ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ಪುರಸ್ಕೃತರಾದ ಕೆ.ಎಲ್.ಪ್ರಥಮ್ ರೈ, ಪ್ರಸಾದ್ ಹಾಗೂ ಕಡಬ ಮೆಸ್ಕಾಂ ಶಾಖೆಯ ಉದ್ಯೋಗಿ ಧನ್ಯರವರ ಪುತ್ರಿ, ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ಪುರಸ್ಕೃತೆ ಇಹಾ.ಎನ್ ಗೌಡ, ರಾಜೀವ್ ಕೊಕ್ಕಡ ಹಾಗೂ ದಿವ್ಯಾ ದಂಪತಿ ಪುತ್ರಿ, ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ಪುರಸ್ಕೃತೆ ವಿಷ್ಣುಪ್ರಿಯ ಕೊಕ್ಕಡರವರಿಗೆ ಕನ್ನಡಶ್ರೀ ರಾಜ್ಯ ಪುರಸ್ಕಾರ-2021 ನೀಡಿ ಗೌರವಿಸಲಾಯಿತು.
—ಜಾಹೀರಾತು—

















Leave a Reply