ನೆಲ್ಯಾಡಿ: ಆರ್ಲ ಸೆಂಟ್ ಮೇರಿಸ್ ಚರ್ಚ್‍ನಲ್ಲಿ ಸಂಡೆ ಸ್ಕೂಲ್ ಪ್ರಾರಂಭೋತ್ಸವ

Nellyadi

ನೆಲ್ಯಾಡಿ: ಆರ್ಲ ಸೆಂಟ್ ಮೇರಿಸ್ ಚರ್ಚ್‍ನಲ್ಲಿ ಸಂಡೆ ಸ್ಕೂಲ್ ಪ್ರಾರಂಭೋತ್ಸವ

ನೆಲ್ಯಾಡಿ: ಇಲ್ಲಿಯ ಆರ್ಲ ಸೆಂಟ್ ಮೇರಿಸ್ ಚರ್ಚ್‍ನಲ್ಲಿ 2025-26ನೇ ಸಾಲಿನ ನೈತಿಕ ಶಿಕ್ಷಣ ಬೋಧನೆಗಾಗಿ ನಡೆಯುವ ಸಂಡೆ ಸ್ಕೂಲ್ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಅಧ್ಯಯನ ವರ್ಷವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಹೈಕೋರ್ಟ್, ಮಂಗಳೂರು ಹಾಗೂ ಬೆಳ್ತಂಗಡಿ ನ್ಯಾಯಾಲಯಗಳ ಹಿರಿಯ ವಕೀಲ ಹಾಗೂ ಅನುಭವಿ ಮೋಟಿವೇಶನ್ ತರಬೇತುದಾರ ನ್ಯಾಯವಾದಿ ಜೀತಿನ್ ಬೆಳ್ತಂಗಡಿ, “ನೈತಿಕ ಶಿಕ್ಷಣವೆಂಬ ಬೆಳಕು ಇಲ್ಲದೆ ಸಮಾಜಕ್ಕೆ ದಾರಿಯೇ ಇಲ್ಲ. ಬಾಲ್ಯದಲ್ಲೇ ನೈತಿಕ ಮೌಲ್ಯಗಳು ಬೆಳೆದು ಬಾಳಿನ ಭಾಗವಾಗಬೇಕಾದರೆ ಸಂಡೆ ಸ್ಕೂಲ್‍ಗಳು ಪ್ರಮುಖ ಪಾತ್ರ ವಹಿಸುತ್ತವೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಸಾಧಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಧರ್ಮಗುರು ವಂ.ಫಾ. ಶಾಜಿ ಮಾತ್ಯು, ಸಿಸ್ಟರ್ ಮೆರ್ಸಿ, ಸಿಸ್ಟರ್ ತೆರೆಸ್ ಕುರಿಯನ್, ಸಂಡೆ ಸ್ಕೂಲ್ ಮುಖ್ಯ ಶಿಕ್ಷಕಿ ಜೋಯ್, ಟ್ರಸ್ಟಿ ಜೋಸ್ಟಿನ್ ಹಾಗೂ ಹಲವು ಸಮುದಾಯದ ಗಣ್ಯರು ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!