ಕಡಬ ಸರಕಾರಿ ಶಾಲೆಯಲ್ಲಿ ಧರ್ಮಸ್ಥಳ ಯೋಜನೆಯ ಶೌರ್ಯ ಘಟಕದ ಶ್ರಮದಾನ

Kadaba

ಕಡಬ ಸರಕಾರಿ ಶಾಲೆಯಲ್ಲಿ ಧರ್ಮಸ್ಥಳ ಯೋಜನೆಯ ಶೌರ್ಯ ಘಟಕದ ಶ್ರಮದಾನ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯದ ಶೌರ್ಯ ಘಟಕದಿಂದ ಪರಿಸರ ಸಂರಕ್ಷಣೆ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಕಡಬದ ಸರಕಾರಿ ಮಾದರಿ ಶಾಲೆಯಲ್ಲಿ ನಡೆಸಲಾಯಿತು.

ಶಾಲಾ ಆವರಣದಲ್ಲಿ ಹಸಿರು ನೆಲೆಗಟ್ಟುವಂತೆ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಿಸರ ಉಳಿವಿಗಾಗಿ ಜನಪ್ರತಿನಿಧಿಗಳು ಮತ್ತು ಶಿಕ್ಷಕರು ಹೆಚ್ಚು ಗಮನಹರಿಸುವ ಅಗತ್ಯವಿದೆ ಎಂಬ ಸಂದೇಶ ಅವರು ಕಾರ್ಯಕ್ರಮದ ಮೂಲಕ ನೀಡಿದರು.

ಕಾರ್ಯಕ್ರಮದಲ್ಲಿ ಶೌರ್ಯ ಘಟಕದ ಸದಸ್ಯರಾದ ವೇಣುಗೋಪಾಲ್, ಆನಂದ ಮೂರಾಜೆ, ಧನಂಜಯ, ದಯಾನಂದ, ಲೋಕೇಶ್, ಗಣೇಶ್, ಆನಂದ ಪಿಜಕ, ಲಲಿತ, ಭವಾನಿ, ನಳಿನಿ ಹಾಗೂ ರಮೇಶ್ ಇವರು ಶ್ರಮದಾನದ ಮೂಲಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಆನಂದ ಅಜಿಲ ನೇತೃತ್ವದಲ್ಲಿ ಶಿಕ್ಷಕ ವೃಂದ, ಮೇಲ್ವಿಚಾರಕ ವಿಜೇಶ್ ಜೈನ್, ಶೌರ್ಯ ಘಟಕದ ಇತರ ಸದಸ್ಯರು ಹಾಗೂ ಸೇವಾ ಪ್ರತಿನಿಧಿ ನಳಿನಿ ಅವರು ಸಹಕಾರ ನೀಡಿದರು.

ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕಾರ್ಯದೊಂದಿಗೆ ಪರಿಸರ ಪ್ರಜ್ಞೆ ಅರಿತುಕೊಂಡು ಸಕ್ರಿಯವಾಗಿ ಭಾಗವಹಿಸಿದರು.

  •  

Leave a Reply

You May Have Missed

error: Content is protected !!