ಕಡಬ ಸರಸ್ವತೀ ಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆ

Kadaba

ಕಡಬ ಸರಸ್ವತೀ ಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆ

ಕಡಬ: ಇಲ್ಲಿನ ಸರಸ್ವತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸರಸ್ವತಿ ವಿದ್ಯಾಲಯದ ಪ್ರಾಥಮಿಕ ವಿಭಾಗದ ಸಹ ಶಿಕ್ಷಕರಾದ ಗಿರೀಶ್ ಅವರು ಭಾಗವಹಿಸಿ, ಛತ್ರಪತಿ ಶಿವಾಜಿ ಮಹಾರಾಜರ ವೀರಗಾಥೆ ಮತ್ತು ಅವರು ಕಟ್ಟಿದ ಹಿಂದೂ ಸಾಮ್ರಾಜ್ಯದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಅವರು ಮಹಾರಾಜರ ಶೌರ್ಯ, ಸಂಯಮ, ಹಾಗೂ ಜನಪರ ಆಡಳಿತದ ವಿಚಾರಗಳನ್ನು ವಿದ್ಯಾರ್ಥಿಗಳ ಮುಂದೆ ವಿಸ್ತೃತವಾಗಿ ಮಂಡಿಸಿದರು.

ಸಭಾಧ್ಯಕ್ಷರಾಗಿ ಆಡಳಿತ ಮಂಡಳಿ ಅಧ್ಯಕ್ಷರಾದ ಸದಾಶಿವ ಭಟ್ ಅವರು ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರಭಕ್ತಿಯ ಒಗ್ಗಟ್ಟನ್ನು ಪುನರುಚ್ಚರಿಸಿದರು. ವೇದಿಕೆಯಲ್ಲಿ ಸಂಚಾಲಕರಾದ ಅಜಿತ್ ರೈ ಆರ್ತಿಲ ಮತ್ತು ಮುಖ್ಯ ಗುರುಗಳಾದ ವಸಂತ ಕೆ. ಉಪಸ್ಥಿತರಿದ್ದರು.

ಹತ್ತನೇ ತರಗತಿ ವಿದ್ಯಾರ್ಥಿಗಳಾದ ಹರ್ಷಿತ್ ಕೆ. ಸ್ವಾಗತಿಸಿದರು, ಪ್ರಯಾಗ್ ಪಿ.ವಿ. ವಂದಿಸಿದರು, ವಿದ್ಯಾರ್ಥಿನಿ ಪ್ರೇಕ್ಷ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

You May Have Missed

error: Content is protected !!