ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್ : ವಾಹನ ಸವಾರರ ಪರದಾಟ!

ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್ : ವಾಹನ ಸವಾರರ ಪರದಾಟ!

ಮಂಗಳೂರು : ನಗರದಲ್ಲಿ ಕಳೆದ ಕೆಲ ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದು, ಪಂಪ್‌ವೆಲ್ ವೃತ್ತವು ಮತ್ತೆ ಮುಳುಗಡೆಯಾಗಿದೆ. ಭಾರೀ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ರಸ್ತೆಯಲ್ಲಿ ನಿಂತ ನೀರಿನಿಂದ ಬಸ್ಸೊಂದು ಕೆಟ್ಟು ನಿಂತಿದ್ದು, ಸಾರ್ವಜನಿಕರು ಬಸ್ಸನ್ನು ರಸ್ತೆ ಬದಿಗೆ ತಳ್ಳಿದ್ದಾರೆ.

ಇನ್ನು ಪಡೀಲ್ ರೈಲ್ವೆ ಅಂಡರ್ ಪಾಸ್​​ನಲ್ಲಿಯೂ ರಸ್ತೆಯಲ್ಲಿ ನೀರು ತುಂಬಿ ವಾಹನ ಓಡಾಟಕ್ಕೆ ಅಡಚಣೆಯಾಗಿದೆ. ನಗರದ ಕಾರ್​ಸ್ಟ್ರೀಟ್​ನಲ್ಲಿ ಕೃತಕ ನೆರೆಗೆ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ತುಂಬಿದ್ದು, ಮನೆಯೊಳಗೆ ನೀರು ನುಗ್ಗಿದೆ.
ಹವಾಮಾನ ಇಲಾಖೆ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್​​ ಅಲರ್ಟ್ ಘೋಷಿಸಿದ್ದರೂ ಜಿಲ್ಲೆಯಲ್ಲಿ ಭಾರೀ ಮಳೆ ಆಗಿರಲಿಲ್ಲ. ಆದರೆ, ಇಂದು ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು, ದಟ್ಟ ಮೋಡಗಳು ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.16ರ ಮುಂಜಾನೆ ವರೆಗೆ ರೆಡ್​​ ಅಲರ್ಟ್ ಎಚ್ಚರಿಕೆ ಇದ್ದು, ಇನ್ನಷ್ಟು ಭಾರಿ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.

  •  

Leave a Reply

You May Have Missed

error: Content is protected !!