ಕೊಕ್ಕಡ: ಬರೆಂಗಾಯ ಸೇತುವೆ ಬಳಿ ರಿಕ್ಷಾ, ಪಿಕಪ್ ಡಿಕ್ಕಿ : ಇಬ್ಬರಿಗೆ ಗಾಯ



ಕೊಕ್ಕಡ: ಬರೆಂಗಾಯ ಸೇತುವೆ ಬಳಿ ಸೋಮವಾರದಂದು ಸಂಜೆ ರಿಕ್ಷಾ ಮತ್ತು ಯೋಧ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ರಿಕ್ಷಾ ಚಾಲಕ ಜೀವನ್ ಹಾಗೂ ಸಹಪ್ರಯಾಣಿಕ ಕಿಟ್ಟು ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿ ಪಲ್ಟಿಯಾಗಿದೆ. ಪಿಕಪ್ ವಾಹನದ ಮುಂಭಾಗಕ್ಕೂ ಹಾನಿಯಾಗಿದೆ.

























Leave a Reply