ಕುಟ್ರುಪಾಡಿ ಅಂಗನವಾಡಿ ಕೇಂದ್ರದಲ್ಲಿ ಭಾವಪೂರ್ಣ ಸ್ವಾತಂತ್ರ್ಯೋತ್ಸವ

Kadaba

ಕುಟ್ರುಪಾಡಿ ಅಂಗನವಾಡಿ ಕೇಂದ್ರದಲ್ಲಿ ಭಾವಪೂರ್ಣ ಸ್ವಾತಂತ್ರ್ಯೋತ್ಸವ

ಕಾಯರಡ್ಕ: ಕುಟ್ರುಪಾಡಿ ಗ್ರಾಮದ ಕುಟ್ರುಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯದ 79ನೇ ಹಬ್ಬವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ಬಾಲವಿಕಾಸ ಸಮಿತಿ, ಸ್ತ್ರೀಶಕ್ತಿ ಸಂಘ, ಊರವರು ಹಾಗೂ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಕುಟ್ರುಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸಂತೋಷ್ ದೋಳ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು. “ಸ್ವಾತಂತ್ರ್ಯ ದಿನ ಕೇವಲ ಆಚರಣೆಗಾಗಿ ಅಲ್ಲ, ಅದು ನಮ್ಮ ಹೊಣೆಗಾರಿಕೆಯನ್ನು ನೆನಪಿಸುವ ದಿನ” ಎಂದು ಅವರು ಪ್ರೇರಣಾದಾಯಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಲಿಂಗಪ್ಪ ಗೌಡ ಕೊಯಕ್ಕುರಿ, ಗಂಗಾಧರ ಗೌಡ ಬೈದ್ರಿಜಾಲ್, ಚೋಮ ಕಾರ್ಕಳ, ಪಾರ್ವತಿ ಕೊಯಕ್ಕುರಿ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷರು, ಬಾಲ ವಿಕಾಸ ಸಮಿತಿಯ ಸದಸ್ಯರು, ಮಕ್ಕಳ ಪೋಷಕರು, ಅಂಗನವಾಡಿ ಸಹಾಯಕಿ ಲಕ್ಷ್ಮಿ ಹಾಗೂ ಅನೇಕರು ಹಾಜರಿದ್ದರು.

ಅಂಗನವಾಡಿ ಕಾರ್ಯಕರ್ತೆಯಾದ ರತ್ನ ಸ್ವಾಗತಿಸಿದರು. ಮಕ್ಕಳಿಗೆ ಸಿಹಿ ತಿಂಡಿ ವಿತರಿಸುವ ವಿತರಿಸಲಾಯಿತು.

  •  

Leave a Reply

You May Have Missed

error: Content is protected !!