ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

Dharmasthala Temple

ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

ಮಂಗಳೂರು: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಬಂಧನವಾದ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಶಿವ ರುದ್ರತಾಂಡವ ಮಾಡುತ್ತಿರುವ ಫೋಟೋವನ್ನು ಅಪ್ಲೋಡ್‌ ಮಾಡಲಾಗಿದೆ.

ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ ಫೋಟೋ ಅನಾವರಣವಾಗಿದೆ.

ಧರ್ಮಸ್ಥಳ ದೇವರ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಷಡ್ಯಂತ್ರ ಮಾಡಿ ಗ್ಯಾಂಗ್‌ ಸುಳ್ಳಿನ ಕೋಟೆ ಕಟ್ಟಿತ್ತು. ಒಂದೊಂದೇ ಸುಳ್ಳಿನ ಕೋಟೆಗಳು ಕಳಚಿ ಬಿದ್ದು ಷಡ್ಯಂತ್ರ ಮಾಡುತ್ತಿದವರು ಬಂಧನವಾಗುತ್ತಿದ್ದಂತೆ ಆಡಳಿತ ಮಂಡಳಿ ಶಿವರುದ್ರ ತಾಂಡವದ ಫೋಟೋ ಹಾಕಿ ನಮೋ ಮಂಜುನಾಥ ಎಂದು ಬರೆದು ಅಪಪ್ರಚಾರ ಮಾಡಿದವರಿಗೆ ಸಂದೇಶ ಕಳುಹಿಸಿದೆ.

ಶಿವ ರುದ್ರ ತಾಂಡವ ಸಂತೋಷ ಮತ್ತು ಭಾವಪರಾವಶತೆಯನ್ನು ಕೋಪವನ್ನು ಸಂಕೇತಿಸುತ್ತದೆ. ಅಧರ್ಮದ ವಿನಾಶವನ್ನು, ಅಹಂಕಾರದ ನಾಶವನ್ನು ಶಿವರುದ್ರತಾಂಡವ ಸೂಚಿಸುತ್ತದೆ. ಢಮರುಗ ಹಿಡಿದ ರೌದ್ರತೆ ತೋರುವ ಶಿವನ ಉಗ್ರ ಮತ್ತು ವಿನಾಶಕಾರಿ ಸ್ವರೂಪವನ್ನು ಬಿಂಬಿಸುತ್ತದೆ.

  •  
Previous post

“ಆಟಿದ ನೆಂಪುಡು ಸೋಣದ ಪೊಲಬು” – ನೆಲ್ಯಾಡಿ ಸಂತ ಜಾರ್ಜ್ ಕಾಲೇಜಿನಲ್ಲಿ ಸಂಪ್ರದಾಯ-ಸಮುದಾಯ-ಸಹಭಾಗಿತ್ವದ ಆಟಿ ಕೂಟ

Next post

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶಿವ ಸುಬ್ರಹ್ಮಣ್ಯ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆ

Leave a Reply

You May Have Missed

error: Content is protected !!