ಭಾರಿ ಗಾಳಿ ಮಳೆ ಆರ್ಭಟ: ತೆಂಗಿನ ಮರ ಬಿದ್ದು ಮನೆಗೆ ಹಾನಿ

ಭಾರಿ ಗಾಳಿ ಮಳೆ ಆರ್ಭಟ: ತೆಂಗಿನ ಮರ ಬಿದ್ದು ಮನೆಗೆ ಹಾನಿ

ಭಾರಿ ಗಾಳಿ ಮಳೆ ಆರ್ಭಟ: ತೆಂಗಿನ ಮರ ಬಿದ್ದು ಮನೆಗೆ ಹಾನಿ

ಭಾರಿ ಗಾಳಿ ಮಳೆ ಆರ್ಭಟ: ತೆಂಗಿನ ಮರ ಬಿದ್ದು ಮನೆಗೆ ಹಾನಿ

ಕೊಕ್ಕಡ : ಮಾ.28ರಂದು ಸಂಜೆ ಸುರಿದ ಭಾರಿ ಗಾಳಿ-ಮಳೆಯ ಪರಿಣಾಮವಾಗಿ ಕಳೆಂಜ ಸಮೀಪದ ಬೀಜದಡಿ ಪಾದೆ ಎಂಬಲ್ಲಿ ತೆಂಗಿನ ಮರವು ಮನೆ ಮೇಲೆ ಬಿದ್ದು ಹಾನಿ ಉಂಟಾದ ಘಟನೆ ನಡೆದಿದೆ.

ಬೀಜದಡಿ ಪಾದೆಯ ನಿವಾಸಿ ರುಕ್ಮಿಣಿ ಅವರ ಮನೆ ಮುಂಭಾಗಕ್ಕೆ ತೆಂಗಿನ ಮರವು ಬಿದ್ದು, ಮನೆಯ ಮುಂಭಾಗದ ಭಾಗಕ್ಕೆ ಅಪಾರ ಹಾನಿಯಾಗಿದೆ. ಅದೃಷ್ಟವಶಾತ್, ಘಟನೆ ನಡೆದ ವೇಳೆ ಮನೆಯವರು ಎಲ್ಲರೂ ಒಳಕೋಣೆಯಲ್ಲಿ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ದೊಡ್ಡ ಅನಾಹುತವನ್ನೇ ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದರು.

ಘಟನೆ ತಿಳಿದ ತಕ್ಷಣವೇ ಸ್ಥಳಕ್ಕೆ ಪಂಚಾಯತ್ ಮಾಜಿ ಸದಸ್ಯ ಹರೀಶ ಕೊಯ್ಲ ಹಾಗೂ ಸ್ಥಳೀಯರು ಧಾವಿಸಿ, ಮನೆ ಮೇಲೆ ಬಿದ್ದಿದ್ದ ತೆಂಗಿನ ಮರವನ್ನು ತೆರವುಗೊಳಿಸಿದರು.

Leave a Reply

You May Have Missed

error: Content is protected !!