ಶಿರಾಡಿ: ವಿ.ಎ.ತೋಮಸ್ ನಿಧನ

ಶಿರಾಡಿ: ವಿ.ಎ.ತೋಮಸ್ ನಿಧನ

ಶಿರಾಡಿ: ವಿ.ಎ.ತೋಮಸ್ ನಿಧನ

ಶಿರಾಡಿ: ವಿ.ಎ.ತೋಮಸ್ ನಿಧನ

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್‍ನಲ್ಲಿ ಕುಡಿಯುವ ನೀರು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ, ಶಿರಾಡಿ ಗ್ರಾಮದ ಮಿತ್ತನಾಜೆ ವಡೆಯಾಟ್ ನಿವಾಸಿ ವಿ.ಎ.ತೋಮಸ್ ಯಾನೆ ಸಜಿ(53ವ.)ಅವರು ಮಾ.27ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಿ.ಎ.ತೋಮಸ್ ಅವರು ಕಳೆದ 16 ವರ್ಷಗಳಿಂದ ಶಿರಾಡಿ ಗ್ರಾಮ ಪಂಚಾಯತ್‍ನಲ್ಲಿ ಕುಡಿಯುವ ನೀರು ಪಂಪ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.

ಮೃತರು ತಾಯಿ ಅನ್ನಮ್ಮ, ಪತ್ನಿ ಮಿನಿ, ಸಹೋದರರಾದ ವಿ.ಎ.ಜೋಸೆಫ್, ವಿ.ಎ.ಶಿಬು ಅವರನ್ನು ಅಗಲಿದ್ದಾರೆ.

 

Leave a Reply

You May Have Missed

error: Content is protected !!