ನೆಲ್ಯಾಡಿ: ಸಂತ ಅಲ್ಫೋನ್ಸ ಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್ ಫಾ.ಡಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಗೆ ಸನ್ಮಾನ

ನೆಲ್ಯಾಡಿ ಸಂತ ಅಲ್ಫೋನ್ಸ ಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್ ಫಾ.ಡಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಗೆ ಸನ್ಮಾನ

ನೆಲ್ಯಾಡಿ: ಸಂತ ಅಲ್ಫೋನ್ಸ ಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್ ಫಾ.ಡಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಗೆ ಸನ್ಮಾನ

 

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜೆನರಲ್ ಆಗಿ ನೇಮಕಗೊಂಡ ರೆ.ಫಾ.ಡಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ನಾಗರಿಕರ ಪರವಾಗಿ ಗೌರವ ಸಮರ್ಪಿಸಿ ಸನ್ಮಾನಿಸಲಾಯಿತು.

ಮೂಲತಃ ಉದನೆ ಗ್ರಾಮದವರಾದ ಫಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರು ರೋಮ್‌ನ ಪ್ರಸಿದ್ಧ ಡೆಮಿಷಿಯಾನೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ತಮ್ಮ ಗುರುಸೇವೆಯನ್ನು ಅವರು ಕುಂದಾಪುರ ತಾಲೂಕಿನ ಜಡ್ಕಲ್ ಹಾಗೂ ಮುದೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಗಾಡಿ, ಉಜಿರೆ, ಧರ್ಮಸ್ಥಳ, ಕುಟ್ರಪಾಡಿ, ಕಂಕನಾಡಿ ಮತ್ತು ಕೊಡಗು ಜಿಲ್ಲೆಯ ಹೊಸಕೋಟೆ ಮೊದಲಾದ ಚರ್ಚ್ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಧರ್ಮಗುರು ವಂ.ಫಾ. ಶಾಜಿ ಮಾತ್ಯು ಅವರು ಸಕ್ರಿಯ ಸೇವಾಭಾವ, ಸಂಘಟನೆ ಶಕ್ತಿ ಮತ್ತು ಆಡಳಿತ ಸಾಮರ್ಥ್ಯ ಹೊಂದಿರುವ ಫಾ.ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರ ಪದೋನ್ನತಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ ಎಂದರು ಹಾಗೂ ನೂತನ ವಿಕಾರ್ ಜೆನರಲ್ ಅವರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಅವರ ಮುಂದಿನ ಸೇವಾ ಜೀವನಕ್ಕೆ ಆಶೀರ್ವಾದಗಳನ್ನು ಕೋರಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಪಾಲನಾ ಸಮಿತಿಯ ಸದಸ್ಯರಾದ ಜೋನ್ಸನ್, ರಾಜೇಶ್, ರೆಜಿ ಜೋಯ್ ಹಾಗೂ ಸಿಸ್ಟರ್ ಲಿಸ್ ಮಾತ್ಯು ಉಪಸ್ಥಿತರಿದ್ದು ಸನ್ಮಾನ ನೆರವೇರಿಸಿದರು. ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

 

Leave a Reply

You May Have Missed

error: Content is protected !!