ಪಡುಬೆಟ್ಟು ಶಾಲಾ ಆವರಣ ಗೋಡೆ ರಚನೆಗೆ ಗುದ್ದಲಿಪೂಜೆ

ಪಡುಬೆಟ್ಟು ಶಾಲಾ ಆವರಣ ಗೋಡೆ ರಚನೆಗೆ ಗುದ್ದಲಿಪೂಜೆ

ನೇಸರ ಮಾ.23 ಪಡುಬೆಟ್ಟು ಸರಕಾರಿ ಪ್ರೌಢಶಾಲೆಯ ಆವರಣ ಗೋಡೆ ರಚನೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲಾಯಿತು.
ನೆಲ್ಯಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾ ಎನ್., ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಅಣ್ಣಿ ಎಲ್ತಿಮಾರ್, ಉಪಾಧ್ಯಕ್ಷ ರಮೇಶ್ ಶೆಟ್ಟಿ ಬೀದಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಸಲಾಂ ಬಿಲಾಲ್, ಪುಷ್ಪ ಪಡುಬೆಟ್ಟು, ಜಯಲಕ್ಷ್ಮಿ, ಗುತ್ತಿಗೆದಾರ ಶಿವಪ್ರಕಾಶ್ ಬೀದಿಮಜಲು ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯಗುರು ಕಮಲ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ವಂದಿಸಿದರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

You May Have Missed

error: Content is protected !!