ಪಟ್ರಮೆ: ಪಚ್ಚೆ ಮೈಪಾಲ ರಸ್ತೆಯ ಎಲಿಕಳ ವಾಹನ ಸಂಚಾರಕ್ಕೆ ಮುಕ್ತ

ಪಟ್ರಮೆ: ಪಚ್ಚೆ ಮೈಪಾಲ ರಸ್ತೆಯ ಎಲಿಕಳ ವಾಹನ ಸಂಚಾರಕ್ಕೆ ಮುಕ್ತ

ನೇಸರ ಜೂ.15: “ಗುಡ್ಡ ಜರಿದು ಎರಡು ದಿನವಾದರೂ ಸರಿಗೊಳ್ಳದ ಸಂಪರ್ಕರಸ್ತೆ: ಪಂಚಾಯತ್ ನ ದಿವ್ಯ ನಿರ್ಲಕ್ಷಕ್ಕೆ ಸ್ಥಳೀಯರ ಆಕ್ರೋಶ” ಎಂಬ ಶೀರ್ಷಿಕೆಯಡಿ “ನೇಸರ ನ್ಯೂಸ್” ಜೂ.14 ರಂದು ಸಚಿತ್ರ ವರದಿ ಮಾಡಿತ್ತು. ಇದೀಗ ಪಂಚಾಯತ್ ಎಚ್ಚೆತ್ತು, ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರೋ ಪಚ್ಚೆ ಮೈಪಾಲ ರಸ್ತೆಯ ಎಲಿಕಳ ಎಂಬಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಗುಡ್ಡ ಜರಿದು ರಸ್ತೆಗೆ ಬಿದ್ದಿದ್ದ ಮಣ್ಣನ್ನು ಇಂದು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಟನೆ ನಡೆದು ಎರಡು ದಿನವಾದರೂ ಸ್ಥಳೀಯ ಪಂಚಾಯತ್ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯ ಜನತೆ ಆಕ್ರೋಶಗೊಂಡಿದ್ದರು.

ಜಾಹೀರಾತು

Leave a Reply

You May Have Missed

error: Content is protected !!