ಸುರಕ್ಷಾ ಸೂಪರ್ ಮಾರ್ಕೆಟ್ ಗೃಹಬಳಕೆ ವಸ್ತುಗಳು, ಫ್ಯಾನ್ಸಿ ಹಾಗೂ ಫೂಟ್‍ವೇರ್ ಮಳಿಗೆಯ ಶುಭಾರಂಭ: ನೆಲ್ಯಾಡಿ

ಸುರಕ್ಷಾ ಸೂಪರ್ ಮಾರ್ಕೆಟ್ ಗೃಹಬಳಕೆ ವಸ್ತುಗಳು, ಫ್ಯಾನ್ಸಿ ಹಾಗೂ ಫೂಟ್‍ವೇರ್ ಮಳಿಗೆಯ ಶುಭಾರಂಭ: ನೆಲ್ಯಾಡಿ

ಫೋಟೋ: ನಿಸರ್ಗ ಸ್ಟುಡಿಯೋ

ನೇಸರ ನ11: ನೆಲ್ಯಾಡಿಯ ಮುಖ್ಯರಸ್ತೆಯ ಶಿಲ್ಪಾ ಸಂಕೀರ್ಣದಲ್ಲಿ, ಸುರಕ್ಷಾ ಸೂಪರ್ ಮಾರ್ಕೆಟ್ ಮನೆಗೃಹಬಳಕೆ ವಸ್ತುಗಳು, ಫ್ಯಾನ್ಸಿ ಹಾಗೂ ಫೂಟ್‍ವೇರ್ ಮಳಿಗೆಯ ಶುಭಾರಂಭಗೊಂಡಿತು. ಶಿಲ್ಪಾ ಸಂಕೀರ್ಣದ ಮಾಲಕರಾದ ಶಿವಣ್ಣ.ಪಿ. ಹೆಗ್ಡೆ ದೀಪಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭವನ್ನು ಕೋರಿದರು. ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕಾರ್ಯದರ್ಶಿ ಪ್ರವೀಣ್‍ಕುಮಾರ್ ದೊಂತಿಲ, ಅಲೋಕ್ ಕುಮಾರ್, ಸುಮಿತ್ ರವರು ಶುಭ ಹಾರೈಸಿದರು, ಮಾಜಿ. ತಾ.ಪಂ. ಸದಸ್ಯೆ ಶ್ರೀಮತಿ ಉಷಾಅಂಚನ್, ಸರ್ವೋತ್ತಮ ಗೌಡ, ಉದಯಕುಮಾರ್ ಗೌಡ ದೋಂತಿಲ, ರಾಕೇಶ್. ಎಸ್, ರವಿಚಂದ್ರ ಹೊಸವಕ್ಲು, ಸತೀಶ್ ಭಟ್, ಮಾಲಕರ ಮಾತೃಶ್ರೀ ಪುಷ್ಪಾವತಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸುರೇಶ ಪಡಿಪಂಡ ಸ್ವಾಗತಿಸಿ, ನಿರೂಪಿಸಿದರು, ಮಾಲಕರಾದ ಶ್ರೀಮತಿ ಜ್ಯೋತಿ ಮತ್ತು ರವಿಕುಮಾರ್ ಯವರು ಎಲ್ಲರ ಸಹಕಾರವನ್ನು ಕೋರಿದರು.

Leave a Reply

You May Have Missed

error: Content is protected !!