65ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

65ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

ನೇಸರ ನ11: ವಿಶ್ವ ಹಿಂದೂ ಪರಿಷತ್. ಕೊಕ್ಕಡ ಹಾಗೂ ಶ್ರೀ ರಾಮ ಸೇವಾ ಟ್ರಸ್ಟ್(ರಿ), ಕೊಕ್ಕಡ ವತಿಯಿಂದ ದಿನಾಂಕ 10/11/2021 ನೇ ಬುಧವಾರ 16/11/2021 ರವರೆಗೆ 65ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಇಂದು ದೇವರ ಮೂರ್ತಿಯನ್ನು ಶಿಶಿಲದ ಬರ್ಗುಳದ ದಿ.ಪುರುಪೋತ್ತಮ ನಾಯಕ್ ಇವರ ಮನೆಯಿಂದ ಕೊಕ್ಕಡಕ್ಕೆ ಶೋಭಾಯಾತ್ರೆ, ವಾಹನ ಜಾಥದ ಮೂಲಕ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಭಾಸ್ಕರ್ ಧರ್ಮಸ್ಥಳ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ನವೀನ್ ನೆರಿಯ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹಕಾರ್ಯದರ್ಶಿ, ರಾಘವೇಂದ್ರ ನಾಯಕ್, ಹಿರಿಯರಾದ ಡಾ.ಮೋಹನ್ ದಾಸ್ ಗೌಡ, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ಶಿಶಿಲ ಹಾಗೂ ಭಕ್ತಾದಿಗಳು ಪಾಲ್ಗೊಂಡರು.

Leave a Reply

You May Have Missed

error: Content is protected !!