ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 40ನೇ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 40ನೇ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ನೇಸರ ಜು.09: ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಶಬರೀಶ ಸಭಾಭವನದಲ್ಲಿ 39ನೇ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ಪೊಸಳಿಗೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಳದ ಅಧ್ಯಕ್ಷ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ರಾಕೇಶ್.ಎಸ್., ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮೋಹನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ನವೀನ್ ಕೊಪ್ಪ ಅಧ್ಯಕ್ಷರಾಗಿ ಆಯ್ಕೆಗೊಂಡರು, ಕಾರ್ಯದರ್ಶಿಯಾಗಿ ಮೋಹನ್ ಕಟ್ಟೆ ಮಜಲು, ಉಪಾಧ್ಯಕ್ಷರಾಗಿ ಕೃಷ್ಣಪ್ಪ ನಿಡ್ಡೋಡಿ, ಕೋಶಾಧಿಕಾರಿಯಾಗಿ ದಯಾನಂದ ಆದರ್ಶ, ಜೊತೆ ಕಾರ್ಯದರ್ಶಿ ರಕ್ಷಿತ್ ಮಡಿವಾಳ ಆಯ್ಕೆ ಗೊಂಡರು. ಸಮಿತಿ ಸದಸ್ಯರಾಗಿ ಡಾ.ಸದಾನಂದ ಕುಂದರ್, ಸುಧೀರ್ ಕುಮಾರ್ ಕೆ.ಎಸ್, ಉದಯ ಕುಮಾರ್ ಗೌಡ, ರವಿಪ್ರಸಾದ್ ಶೆಟ್ಟಿ, ಚಂದ್ರಶೇಖರ್ ಬಾಣಜಾಲ್, ರಾಕೇಶ್.ಎಸ್, ಪ್ರಹ್ಲಾದ್ ಶೆಟ್ಟಿ, ಉಮೇಶ್ ಪೂಜಾರಿ, ರಘುನಾಥ, ಸುರೇಶ್ ಪಡಿಪಂಡ, ಅನಿಲ್ ರೈ, ವಿನೋದ್ ಕುಮಾರ್, ಮೋಹನ್ ಶಿಶಿಲ, ಮಂಜುನಾಥ ಗೌಡ, ವಿನಯ್ ಕಟ್ಟೆಮಜಲು, ಹರೀಶ್ ಕಟ್ಟೆಮಜಲು ಆಯ್ಕೆಗೊಂಡರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!